ಡಿಸಿಸಿ ಬ್ಯಾಂಕ್ ಶಾಖೆ ಆರಂಭಕ್ಕೆ ಪರಿಶೀಲಿಸಿ ನಿರ್ಧಾರ | ಚಿಕ್ಕಪೇಟೆಯಲ್ಲಿ ಶಾಖಾ ಕಚೇರಿ ತೆರೆಯುವ ಮನವಿಗೆ ಸ್ಪಂದಿಸಿದ ಆರ್.ಎಂ.ಮಂಜುನಾಥಗೌಡ

ಡಿಸಿಸಿ ಬ್ಯಾಂಕ್ ಶಾಖೆ ಆರಂಭಕ್ಕೆ ಪರಿಶೀಲಿಸಿ ನಿರ್ಧಾರ | ಚಿಕ್ಕಪೇಟೆಯಲ್ಲಿ ಶಾಖಾ ಕಚೇರಿ ತೆರೆಯುವ ಮನವಿಗೆ ಸ್ಪಂದಿಸಿದ ಆರ್.ಎಂ.ಮಂಜುನಾಥಗೌಡ

ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಿಕ್ಕಪೇಟೆ ಸರ್ಕಲ್ ಪ್ರದೇಶದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ತೀರ್ಥಹಳ್ಳಿ ಭೇಟಿ ನೀಡಿದ ಚಿಕ್ಜಪೇಟೆ ನಿಯೋಗದಿಂದ ಈ ಸಂಬಂಧ ಮನವಿ ಸ್ವೀಕರಿಸಿ, ಚಿಕ್ಕಪೇಟೆಯಲ್ಲಿ ಶಾಖೆ ತೆರೆಯಲು ಈ ಹಿಂದೆಯೇ ಬೇಡಿಕೆ ಬಂದಿತ್ತು ಎಂದರು.

ಚಿಕ್ಕಪೇಟೆ ಸರ್ಕಲ್ ಜನನಿಬಿಡ ಪ್ರದೇಶವಾಗಿದೆ. ಅಲ್ಲದೇ ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ, ಉಡುಪಿ, ಕುಂದಾಪುರ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಈ ಹಿಂದೆ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕ್ ಉತ್ತಮ ವ್ಯವಹಾರ ದಾಖಲಿಸಿತ್ತು. ಆದರೆ ಸಿಂಡಿಕೇಟ್ ಬ್ಯಾಂಕ್ ನ್ನು ವೀಲಿನ ಮಾಡಿದ ಹಿನ್ನೆಲೆಯಲ್ಲಿ ನಗರಕ್ಕೆ ವರ್ಗಾವಣೆಗೊಂಡಿದೆ. ನಗರ ಹೋಬಳಿಯ ರೈತ ಕೂಲಿಕಾರ್ಮಿಕರಿಗೆ ಉತ್ತಮ ಆರ್ಥಿಕ ವ್ಯವಹಾರದ ಸಲುವಾಗಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವಂತೆ ಮನವಿ ಮಾಡಿದರು.

ಈ ವೇಳೆ ಆರ್.ಎಂ.ಮಂಜುನಾಥಗೌಡರನ್ನು ನಿಯೋಗ ಸನ್ಮಾನಿಸಿ ಗೌರವಿಸಿತು. ಚಿಕ್ಕಪೇಟೆ ಗ್ರಾಮಸ್ಥರಾದ ಅರುಣಾಚಲ, ಸುರೇಶ್ ಭಟ್, ಕುಮಾರ ಭಟ್, ನಾಗೇಂದ್ರ, ಗಣೇಶರಾವ್, ಮಾಸ್ತಿಕಟ್ಟೆ ವಿದ್ಯಾನಂದರಾವ್ ಉಪಸ್ಥಿತರಿದ್ದರು.

Exit mobile version