
ನಗರ ದರ್ಗಾ ಅಪ್ ಬಳಿ ಬೈಕ್ ಲಾರಿ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು!
ಹೊಸನಗರ: ನಗರದಿಂದ ಹೊಸನಗರ ಮಾರ್ಗದ ದರ್ಗಾ ಅಪ್ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬೈಕ್ ಸವಾರ ಸಾಗರ ತಾಲೂಕಿನ ಹೊನ್ನೆಸರ ಗ್ರಾಮದ ಮೃತ ಅಶೋಕ (24) ಎಂದು ತಿಳಿದು ಬಂದಿದೆ. ಅಡಗೋಡಿಯಲ್ಲಿ ತೋಟದ ಕೆಲಸ ಮುಗಿಸಿಕೊಂಡು ಹೊನ್ನೆಸರದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಗರ ಎಎಸ್ಐ ಕುಮಾರ್ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಪಘಾತ ನಡೆದ ಅರ್ಧ ಗಂಟೆ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಪೊಲೀಸರು ಮುಕ್ತಗೊಳಿಸಿದರು.