ಎಡಿಪಿ ಆಗಿ ಪದೋನ್ನತಿ ಹೊಂದಿದ ಗೋಪಾಲ್ ಗೆ ಬೀಳ್ಕೊಡುಗೆ | ಸನ್ಮಾನಿಸಿ ಅಭಿನಂದಿಸಿದ ಸಿಪಿಐ ಗುರಣ್ಣ ಎಸ್.ಹೆಬ್ಬಾಳ್

ಎಡಿಪಿ ಆಗಿ ಪದೋನ್ನತಿ ಹೊಂದಿದ ಗೋಪಾಲ್ ಗೆ ಬೀಳ್ಕೊಡುಗೆ | ಸನ್ಮಾನಿಸಿ ಅಭಿನಂದಿಸಿದ ಸಿಪಿಐ ಗುರಣ್ಣ ಎಸ್.ಹೆಬ್ಬಾಳ್

ಹೊಸನಗರ: ಹೊಸನಗರದ ನ್ಯಾಯಾಲಯದಲ್ಲಿ 9 ವರ್ಷ ಎಪಿಪಿಯಾಗಿ ಯಶಸ್ವಿ ಕರ್ತವ್ಯ ನಿರ್ವಹಿಸಿ ಎಡಿಪಿಯಾಗಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಹೊಂದಿರುವ ಗೋಪಾಲ್ ರನ್ನು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಸನ್ಮಾನಿಸಿ ಗೌರವಿಸಿದರು.

ಶುಕ್ರವಾರ ಸಿಪಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಐ ಗುರಣ್ಣ ಎಸ್.ಹೆಬ್ಬಾಳ್, ಸರ್ಕಾರಿ ಕೆಲಸ ಪುಣ್ಯದ ಕೆಲಸ. ಜನಸಾಮಾನ್ಯರಿಗೆ ಸ್ಪಂದಿಸುವ ಅವಕಾಶವಿದೆ. ಕರ್ತವ್ಯ ನಿಷ್ಠೆ ಬದುಕಿಗೆ ಸಂತೃಪ್ತಿ ನೀಡುತ್ತದೆ. ಹೊಸನಗರದ ನ್ಯಾಯಾಲಯದಲ್ಲಿ ಎಪಿಪಿಯಾಗಿದ್ದ ಗೋಪಾಲ್ ಉತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿದ ಗೋಪಾಲ್ ಹೊಸನಗರದಲ್ಲಿ ಕಾರ್ಯನಿರ್ವಹಿಸಲು ಉತ್ತಮ ವಾತಾವರಣ ಇತ್ತು. ನ್ಯಾಯಾಲಯ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಹಿರಿಕಿರಿಯ ಅಧಿಕಾರಿಗಳು ವಕೀಲರು ಸಹಕರಿಸಿದ್ದಾರೆ. ನ್ಯಾಯಾಧೀಶರುಗಳು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಅವರೆಲ್ಲರಿಗೂ ಅಬಾರಿ ಆಗಿದ್ದೇನೆ ಎಂದರು.

ಇದೇ ವೇಳೆ ನೂತನ ಎಪಿಪಿಯಾಗಿ ಆಗಮಿಸಿದ ರವಿಕುಮಾರ್ ರಿಗೆ ಸ್ವಾಗತ ಕೋರಲಾಯಿತು.
ಎ.ಆರ್.ಎಸ್.ಐ ಶಿವಪುತ್ರ, ಮುಖ್ಯಪೇದೆ ಗಿರಿಪ್ರಸಾದ್, ಆಶಾ, ಯಶೋದಮ್ಮ, ಗಂಗಪ್ಪ ಬಟೋಲಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Exit mobile version