HOSANAGARA| ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಭೇಟಿ- ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಭೇಟಿ- ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

ಹೊಸನಗರ: ಜುಲೈ ತಿಂಗಳಲ್ಲಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಕೆಪಿಸಿಸಿ ಕಾರ್ಯದರ್ಶಿ, ಜಿ.ಪಂ.ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ತಾಲೂಕಿನ ಪುರಪ್ಪೆಮನೆ, ಹರಿದ್ರಾವತಿ, ಮಾರುತಿಪುರ, ಕೋಡೂರು, ಜೇನಿ ಹಾಗೂ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಹಲವು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ಸರಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಗುರುವಾರ ದಿನವಿಡಿ ಹಾನಿಗೊಳಗಾದ ನಿಂಬೆಸರ ಹಾನಿಯಾದ ರಸ್ತೆ, ಕುಸುಗುಂಡಿ ಧರೆ ಕುಸಿತ, ಒಡೆದ ಕೆರೆ ಚಾನಲ್ ದಂಡೆ, ಮೈತಳ್ಳಿ, ಸಾವಂತೂರಿನ ವಿವಿಧ ಹಾನಿ ಪ್ರದೇಶ ವೀಕ್ಷಿಸಿದರು.
ಈಗಾಗಲೇ ಮಳೆಹಾನಿ ಕುರಿತು ಪಿಡಿಓಗಳಿಂದ ವರದಿ ಪಡೆದು ಶಾಸಕ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಮತ್ತೊಮ್ಮೆ ಭೇಟಿ ನೀಡುವುದಾಗಿ ಗ್ರಾಮಸ್ಥರಿಗೆ ತಿಳಿದರು.

ಈಗಾಗಲೇ ಮನೆಹಾನಿಗೊಳಗಾದ ಕೆಲವರಿಗೆ ಶಾಸಕರ ಆಪ್ತರ ಮೂಲದ ವೈಯಕ್ತಿಕ ಧನಸಹಾಯ ನೀಡಿದ್ದು, ಗಾಳಿ-ಮಳೆಗೆ ವಿದ್ಯುತ್ ಕಣ್ಣುಮುಚ್ಚಲೆ ಕುರಿತಂತೆ ದುರಸ್ತಿಗೆ ಕ್ರಮಕ್ಕೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಪುರಪ್ಪೆಮನೆ ಗ್ರಾ.ಪಂ.ಸದಸ್ಯ ಸಂತೋಷ, ಮಾರುತಿಪುರ ಗ್ರಾ.ಪಂ.ಸದಸ್ಯ ಇಂದ್ರೇಶ್, ಮಾಜಿ ಅಧ್ಯಕ್ಷ ಚಿದಂಬರ್, ಜೇನಿ ಗ್ರಾ.ಪಂ.ಸದಸ್ಯ ಭದ್ರಪ್ಪ,  ಗ್ರಾ.ಪಂ. ಉಪಾಧ್ಯಕ್ಷ ಎಂ.ಕೃಷ್ಣಮೂರ್ತಿ, ಪಿಡಿಓ ಕಾವೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊಸನಗರ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾವಿಕೈ-ನೇರ್ಲೆ- ಹೊಳೆಗದ್ದೆ ಸಂಪರ್ಕ ರಸ್ತೆಯಲ್ಲಿ ಧರೆ ಕುಸಿತ ವೀಕ್ಷಿಸಿದ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್.

Exit mobile version