
Hosanagara| 3.9 ಕಿಮೀ ಹೆದ್ದಾರಿ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ | ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ
ಹೊಸನಗರ: ಪಟ್ಟಣದ ಶಾಸಕರ ಮಾದರಿ ಶಾಲೆಯಿಂದ ಜಯನಗರ ಮಾರ್ಗವಾಗಿ 3.9 ಕಿಮೀ ಹೆದ್ದಾರಿ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿ, ರಾಣೇಬೆನ್ನೂರು ಬೈಂದೂರು 203 ಕಿಮೀ ಉದ್ದ ಇದ್ದು, 171 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 7 ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಹೊಸನಗರ ತಾಲೂಕಿನಲ್ಲಿ 27.78 ಕಿಮೀ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದರು.
ಕಾಮಗಾರಿ ಉತ್ತಮ ಗುಣಮಟ್ಟಕ್ಕೆ ಸೂಚಿಸಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಿಂದ ಹೊಸನಗರದ ಸೌಂಧರ್ಯ ಹೆಚ್ಚಿಸಲುದೆ ಎಂದರು.
ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಪ್ರಮುಖರಾದ ಎರಗಿ ಉಮೇಶ್, ಅಶ್ವಿನಿಕುಮಾರ್, ನಾಸಿರ್, ಮಹಾಬಲರಾವ್, ಚಿದಂಬರ್ ಮಾರುತಿಪುರ, ಶಾಹಿನಾ ನಾಸೀರ್, ಸ್ವಾಮಿ ನೇರ್ಲೆ, ಹೆದ್ದಾರಿ ಅಧಿಕಾರಿಗಳು ಉಪಸ್ಥಿತರಿದ್ದರು.