Hosanagara|ಶಾಸಕರಿಂದ 766ಸಿ ಹೆದ್ದಾರಿ ಕಾಮಗಾರಿಗೆ ಚಾಲನೆ ಎಷ್ಟು ಸರಿ?| ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು ಪ್ರಶ್ನೆ

ಹೊಸನಗರ: ತಾಲೂಕಿನಲ್ಲಿ ಹಾದುಹೋಗುವ ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈ ಹಿಂದೆ ಕೇಂದ್ರ ಸಚಿವ ಗಡ್ಕರಿಯವರೇ ಚಾಲನೆ ನೀಡಿದ್ದಾರೆ. ಇದೀಗ ಮತ್ತೊಮ್ಮೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿರುವುದು ಎಷ್ಟು ಸರಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು ಪ್ರಶ್ನಿಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆದ್ದಾರಿ ಕಾಮಗಾರಿ ಕೇಂದ್ರ ಸರ್ಕಾರದ್ದು, ಸಂಸದ ಬಿ.ವೈ.ರಾಘವೇಂದ್ರರ ಶ್ರಮ. ಅಲ್ಲದೇ ಹಿಂದೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಹೀಗಿದ್ದು ಶಾಸಕರು ಮತ್ತೊಮ್ಮೆ ಚಾಲನೆ ನೀಡಿರುವುದು ಸರಿಯಲ್ಲ ಎಂದರು.
ಇನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಒಮ್ಮೆ ಏಕವಚನದಲ್ಲಿ ಟೀಕಿಸುವುದು. ಮತ್ತೊಮ್ಮೆ ಬಸವಣ್ಣರಿಗೆ ಹೋಲಿಸಿ ಗೌರವಿಸುತ್ತಾರೆ. ಶಾಸಕರ ಈ ಇಬ್ಬಗೆ ನೀತಿ ಏಕೆ ಎಂದು ಪ್ರಶ್ನಿಸಿದರು.
ಬೇಳೂರು ಮೂರನೇ ಬಾರಿ ಶಾಸಕರಾಗಿದ್ದಾರೆ. ತಮ್ಮ ಘನತೆಗೆ ಸರಿಯಾಗಿ ವರ್ತಿಸಲಿ. ಹೀಗೆ‌ ಮುಂದುವರೆದರೇ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

ಬಿಜೆಪಿ ಪ್ರಮುಖರಾದ ಎನ್.ಆರ್.ದೇವಾನಂದ್, ಬಿ.ಯುವರಾಜ್, ಸುರೇಶ್ ಸ್ವಾಮಿರಾವ್, ಎ.ವಿ.ಮಲ್ಲಿಕಾರ್ಜುನ, ಸಂತೋಷ ಮಂಡ್ರಿ, ಮಂಡಾನಿ ಮೋಹನ್, ಬಸವರಾಜ್ ಗೋಷ್ಠಿಯಲ್ಲಿ ಹಾಜರಿದ್ದರು.

Exit mobile version