ಕನ್ಯಾಕುಮಾರಿ ಕರಾಟೆ ಸ್ಪರ್ಧೆಯಲ್ಲಿ ಆಕಾಶ್ ಶೆಟ್ಟಿ, ನಿಧಿ, ಸುಧನ್ವ, ಸಾಧನೆ

ಕನ್ಯಾಕುಮಾರಿ ಕರಾಟೆ ಸ್ಪರ್ಧೆಯಲ್ಲಿ ಆಕಾಶ್ ಶೆಟ್ಟಿ, ನಿಧಿ, ಸುಧನ್ವ, ಸಾಧನೆ

ಹೊಸನಗರ: ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರೀಯ ಅಂತರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ನಗರ ಶ್ರೀಧರಪುರದ ಆಕಾಶ ಶೆಟ್ಟಿ, ಹೊಸನಗರ ಹೋಲಿ ರಿಡೀಮರ್ ಶಾಲೆಯ ನಿಧಿ, ನಗರ ಅಮೃತ ವಿದ್ಯಾಲಯದ ಸುಧನ್ವ ಜೆ.ಗೌಡ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಶ್ರೀಧರಪುರದ ಸದಾಶಿವ ಶೆಟ್ಟಿ ಇವರ ಪುತ್ರ ಆಕಾಶ್ ಶೆಟ್ಟಿ ಕರಾಟೆ ಫೈಟ್ ವಿಭಾಗದಲ್ಲಿ ಪ್ರಥಮ, ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು.

ಅಂತರರಾಜ್ಯ ವಿಭಾಗದಲ್ಲಿ ನಗರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಜಗನ್ನಾಥ ಇವರ ಪುತ್ರ, ಅಮೃತ ವಿದ್ಯಾಶಾಲೆಯ ವಿದ್ಯಾರ್ಥಿ ಸುಧನ್ವ ಜೆ.ಗೌಡ ಕಟ ವಿಭಾಗದಲ್ಲಿ ಪ್ರಥಮ, ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ರಾಷ್ಟ್ರೀಯ ವಿಭಾಗದ ಕರಾಟೆಯಲ್ಲಿ ಹೊಸನಗರ ಹೋಲಿ ರಿಡೀಮರ್ ಶಾಲೆಯ ನಿಧಿ ಕಟ ವಿಭಾಗದಲ್ಲಿ ದ್ವಿತೀಯ, ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅತ್ಯುತ್ತಮ ಸಾಧನೆ ಮೂಲಕ ನಗರ, ಹೊಸನಗರ ತಾಲೂಕಿಗೆ ಕೀರ್ತಿ ತಂದ ಸಾಧಕರನ್ನು ಕರಾಟೆ ತರಭೇತುದಾರ ರಾಘವೇಂದ್ರ ಜೆ.ಕೆ.ಅಭಿನಂದಿಸಿದ್ದಾರೆ.

Exit mobile version