
IMPACT | ಕುಂದಗಲ್ ಭೂಕುಸಿತ ಪ್ರದೇಶಕ್ಕೆ ಸಾಗರ AC ಮತ್ತು ವಿವಿಧ ಅಧಿಕಾರಿಗಳ ದೌಡು | ಸಮೀಪದ ಕುಟುಂಬವೊಂದಕ್ಕೆ ಕೊಟ್ಟ ಸೂಚನೆ ಏನು ಗೊತ್ತಾ?
ಹೊಸನಗರ: ನಗರ ಹೋಬಳಿ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಕುಂದಗಲ್ ಸಮೀಪ ಭೂಮಿ ಬಿರುಕು ಬಿಟ್ಟು ಬಾರೀ ಪ್ರಮಾಣದ ಭೂಕುಸಿತ ಉಂಟಾಗುವ ಭೀತಿ ಎದುರಾಗಿದ್ದು ಸ್ಥಳಕ್ಕೆ ಸಾಗರ ಉಪವಿಭಾಗ ಅಧಿಕಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಳಿಗ್ಗೆ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾಗರ ಉಪವಿಭಾಗಾಧಿಕಾರಿ ಯತೀಶ್.ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕುಸಿತದ ಸಮೀಪ ವಾಸವಿರುವ ರಾಜಶೇಖರ್ ಕುಂದಗಲ್ ಇವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಈ ಮನೆಯಲ್ಲಿ ತಂಗದಂತೆ ಸೂಚಿಸಿದ್ದಾರೆ. ಹೀಗಾಗಿ ಅವರು ಹೊಸನಗರದ ಮನೆಯಲ್ಲಿ ಉಳಿದುಕೊಳ್ಳುವುದಾಗಿ ತಿಳಿಸಿದ್ದಾರೆ.
ಹತ್ತು ದಿನಗಳ ಕಾಲ ಕಾದು ನೋಡೋಣ. ರಸ್ತೆ ಬಗ್ಗೆ ಆತಂಕ ಬೇಡ. ನಂತರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇವರೊಂದಿಗೆ ತಹಶೀಲ್ದಾರ್ ರಶ್ಮೀ ಹಾಲೇಶ್ ಇದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರಿಯಾ ಮತ್ತು ತಂಡ ಭೂಮಿ ಬಿರುಕು ಕುಸಿತದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರಿಂದ ಮಾಹಿತಿ ಪಡೆದರು.