
- SHIMOGA| 1800 ಅಡಿ ದಾಟಿದ ಲಿಂಗನಮಕ್ಕಿ ಜಲಾಶಯ | ಕಳೆದ ಬಾರಿಗಿಂತ ದುಪ್ಪಟ್ಟು ಜಾಸ್ತಿ | ಮಳೆ ಕಡಿಮೆ ಆದ್ರೂ ಒಳಹರಿವು ಎಷ್ಟಿದೆ ಗೊತ್ತಾ?
ಶಿವಮೊಗ್ಗ: ಹಲವು ದಿನಗಳಿಂದ ಶರಾವತಿ ಜಲಾನಯನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ (LINGANAMAKKI DAM) 1800 ಅಡಿ ದಾಟಿದ್ದು ಜಲಾಶಯದ ಮಟ್ಟ 1801 ಅಡಿ ತಲುಪಿದೆ.
ಜು.24 ಮಂಗಳವಾರ ಬೆಳಿಗ್ಗೆ 8 ರ ತನಕದ ವರದಿ ಇದಾಗಿದೆ. ಮಳೆ ಮುಂದುವರಿದ ಕಾರಣ ಲಿಂಗನಮಕ್ಕಿಗೆ 58619 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
1819 ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ತುಂಬಲು ಇನ್ನು 17 ಅಡಿ ಬರಬೇಕಾಗಿದೆ. ಲಿಂಗನಮಕ್ಕಿ 151.64 TMC ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಈವರೆಗೆ 98.40 TMC ನೀರು ಸಂಗ್ರಹವಾಗಿದೆ. ಶೇ.64.89 ರಷ್ಟು ನೀರು ತುಂಬಿದೆ.
ಡಬಲ್ ಜಾಸ್ತಿ:
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30.92 ರಷ್ಟು ಮಾತ್ರ ನೀರು ತುಂಬಿದ್ದು 24 ಜುಲೈ 2023ರ ತನಕ 46.88 TMC ನೀರು ಸಂಗ್ರಹವಾಗಿತ್ತು. ಈಬಾರಿ ದುಪ್ಪಟ್ಟಿಗಿಂತ ಅಧಿಕ ನೀರು ಸಂಗ್ರಹವಾಗಿದೆ.
ಶರಾವತಿ (SHARAVATHI RIVER) ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ 58619 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.