ಮೂರು ದಿನದಿಂದ ಕಾಣೆಯಾಗಿರುವ ಕೆಪಿಸಿ ಭದ್ರತಾ ಸಿಬ್ಬಂದಿ : ಮೂರುದಿನದ ಹುಡುಕಾಟಕ್ಕು ಸಿಗದ ಸುಳಿವು : ಮಾಣಿ ಜಲಾಶಯದ 70 ಅಡಿ ಆಳದಲ್ಲಿ ಶೋಧಕಾರ್ಯ

ಮೂರು ದಿನದಿಂದ ಕಾಣೆಯಾಗಿರುವ ಕೆಪಿಸಿ ಭದ್ರತಾ ಸಿಬ್ಬಂದಿ : ಮೂರುದಿನದ ಹುಡುಕಾಟಕ್ಕು ಸಿಗದ ಸುಳಿವು : ಮಾಣಿ ಜಲಾಶಯದ 70 ಅಡಿ ಆಳದಲ್ಲಿ ಶೋಧಕಾರ್ಯ

ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು ದಿನದಿಂದ ನಾಪತ್ತೆಯಾದ ಘಟನೆ ನಡೆದಿದೆ.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಹೊರಟ ಭರತ್ ವಾಪಾಸ್ ಮನೆಗೆ ಬಂದಿಲ್ಲ.
ಮಾಣಿ ಡ್ಯಾಂ ಸಮೀಪ ಭರತ್ ಬೈಕ್ ಕಂಡುಬಂದಿದ್ದು ಜಲಾಶಯ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ತೀರ್ಥಹಳ್ಳಿ ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕೂಡ ಶೋಧಕಾರ್ಯ ನಡೆಸುತ್ತಿದ್ದಾರೆ. ಜಲಾಶಯದ ಬುಡದಲ್ಲಿ 70 ಅಡಿಗೂ ಹೆಚ್ಚು ಆಳವಿದ್ದು ಶೋಧಕಾರ್ಯ ಸವಾಲಾಗಿದೆ.

ಭರತ್ ಕೆಪಿಸಿಯ ವಾರಾಹಿ ಮಾಣಿ ಡ್ಯಾಂನಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ. ಭರತ್ ಗೆ 9 ವರ್ಷದ ಗಂಡು ಮಗು ಇದ್ದು, ಪತ್ನಿ ಪೂರ್ಣೇಶ್ವರಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದಾರೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ತೆಕಾರ್ಯ ಮುಂದುವರೆದಿದೆ.

Exit mobile version