ಸವಿತಾ ಸಮಾಜಕ್ಕೆ ನಿವೇಶನ ಒದಗಿಸಲು ಪ್ರಯತ್ನ : ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಪರಮೇಶ್

ಸವಿತಾ ಸಮಾಜಕ್ಕೆ ನಿವೇಶನ ಒದಗಿಸಲು ಪ್ರಯತ್ನ : ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಪರಮೇಶ್

ಹೊಸನಗರ: ನಗರ ಹೋಬಳಿ ಸವಿತಾ ಸಮಾಜದ ಘಟಕಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸವಿತಾ ಸಮಾಜದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ.ಪರಮೇಶ್ ಹೇಳಿದರು.

ತಾಲೂಕಿನ ಯಡೂರು ಶ್ರೀ ಗುತ್ತಿ ರೇಣುಕಾಂವ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ಹೋಬಳಿಯ ನೂತನ ಘಟಕಕ್ಕೆ ಚಾಲನೆ ನೀಡಿದರು.

ಜಿಲ್ಲೆಯ ಬಹಳಷ್ಟು ಕಡೆ ಸವಿತಾ ಸಮಾಜಕ್ಕೆ ನಿವೇಶನ ಕೊರತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಂಪರ್ಕ ಸಾಧಿಸಿ ನಿವೇಶನ ದೊರಕಿಸಿಕೊಡುವ ಸಂಬಂಧ ಪ್ರಾಮಾಣಿಕ ಹೋರಾಟವನ್ನು ಜಿಲ್ಲಾ ಸಂಘ ಮಾಡಲಿದೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಚ, ಗ್ರಾಪಂ ಸದಸ್ಯ ಸದಾನಂದ, ಸವಿತಾ ಬಂಧುಗಳು ಎಲ್ಲಾ ಸಮುದಾಯದ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ಪ್ರತಿ ವ್ಯಕ್ತಿಗೂ ಅವರು ಅನಿವಾರ್ಯ. ಜಾತಿ ಮತ ಮೀರಿ ಆ ಸಮುದಾಯದ ಅಭಿವೃದ್ಧಿಗೆ ಎಲ್ಲಾ ಸಮುದಾಯ ಸಹಕರಿಸಬೇಕಿದೆ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಎಂ.ಭಂಡಾರಿ, ಸವಿತಾ ಸಮಾಜ ಕೇವಲ ಕ್ಷೌರಿಕ ವೃತ್ತಿ ನಿರತರ ಸಂಘಟನೆಯಲ್ಲ, ಅದು ಸುಮಾರು 27 ಉಪ ಪಂಗಡಗಳನ್ನ ಒಳಗೊಂಡ, ಆಯ ಉಪ ಪಂಗಡಗಳ ಸರ್ಕಾರಿ ನೌಕರರು, ವ್ಯಾಪಾರಿಗಳು, ವ್ಯವಸಾಯಗಾರರು, ಅರೆಸರ್ಕಾರಿ ನೌಕರರು, ಎಲ್ಲಾ ರೀತಿಯ ಶ್ರಮಿಕರಿಂದ ಕೂಡಿದ ಒಂದು ಅಸಂಘಟಿತ ವಲಯದ ಸಮಾಜ ಎಂದರು.

ನಗರ ಹೋಬಳಿ ಸವಿತಾ ಸಮಾಜದ ಅಧ್ಯಕ್ಷ ಸಂಜೀವ ಭಂಡಾರಿ, ಘಟಕದ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಗೌರವಾಧ್ಯಕ್ಷ ಕೆ.ಮೋಹನ್, ಉಪಾಧ್ಯಕ್ಷ ಗಿರೀಶ್, ಹೊಸನಗರ ತಾಲೂಕು ಅಧ್ಯಕ್ಷ ಬಾಬುರಾವ್, ಉಪಾಧ್ಯಕ್ಷರಾದ ಸುಕೇಶ್, ಕೆ.ಮಂಜುನಾಥ್, ಕೋಶಾಧಿಕಾರಿ ರಾಘವೇಂದ್ರ ನಗರ, ಸಹ ಕಾರ್ಯದರ್ಶಿ ಸುರೇಶ ಭಂಡಾರಿ, ಭಂಡಾರಿ ಸಮಾಜದ ಅಧ್ಯಕ್ಷ ವಿಶ್ವನಾಥ ಸೊನಲೆ, ಶ್ರೀಧರ್, ರಾಘು ಕಾಶೀಪುರ, ಮಂಜುನಾಥ ಭಂಡಾರಿ, ಜಯನಗರ ಕೃಷ್ಣಮೂರ್ತಿ, ಯಡೂರು ಸುರೇಶ್, ಮಣಿಕಂಠ ಭಂಡಾರಿ, ಹೂವಪ್ಪ ಭಂಡಾರಿ, ಸಚಿನ್ ನೇಗಿಲೋಣಿ, ಕೀರ್ತಿ, ಚಂದ್ರ ಭಂಡಾರಿ, ದಿನೇಶ ಭಂಡಾರಿ ಕೆ.ಬಿ.ಸರ್ಕಲ್, ಕೃಷ್ಣ ಭಂಡಾರಿ, ಮಹೇಶ ಭಂಡಾರಿ, ಸತೀಶ ಭಂಡಾರಿ, ಹರೀಶ್ ಭಂಡಾರಿ, ನಗರ ಘಟಕದ ಪ್ರತಿನಿಧಿಗಳು ಹಾಜರಿದ್ದರು.

Exit mobile version