SHIKARIPURA | ಶಿಕಾರಿಪುರ | ಕೋಡಿ‌ ಬಿದ್ದ ಅಂಜನಾಪುರ ಜಲಾಶಯ | ವಾಡಿಕೆಗಿಂತ ಮೊದಲೇ ತುಂಬಿದ ಅಂಜನಾಪುರ DAM

SHIKARIPURA | ಶಿಕಾರಿಪುರ | ಕೋಡಿ‌ ಬಿದ್ದ ಅಂಜನಾಪುರ ಜಲಾಶಯ | ವಾಡಿಕೆಗಿಂತ ಮೊದಲೇ ತುಂಬಿದ ಅಂಜನಾಪುರ DAM

ಶಿಕಾರಿಪುರ: ವ್ಯಾಪಕವಾಗಿ ಸುರಿಯುತ್ತಿರುವ ಮಳೆಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಸಂಪೂರ್ಣ ತುಂಬಿ ಇಂದು‌ ಮಧ್ಯಾಹ್ನ ಕೋಡಿ ಬಿದ್ದಿದೆ.

ಅಂಜನಾಪುರ DAM ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರಿನ ಹರಿವು ಹೆಚ್ಚಿದೆ. ವಾಡಿಕೆಗಿಂತಲೂ‌ ಮೊದಲೇ ತುಂಬಿ ಬಿದ್ದಿದ್ದು ಈ ಪ್ರದೇಶದಲ್ಲಿ ಸಂತಸ ಮನೆಮಾಡಿದೆ.

ಅಂಜನಾಪುರ ಜಲಾಶಯ 1.82 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಶಿಕಾರಿಪುರ ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತದೆ. 6732 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಅಂಜನಾಪುರ ಜಲಾಶಯ ಈ ಭಾಗದ ಜನರಿಗೆ ಮಹತ್ವದ್ದಾಗಿದೆ.

Exit mobile version