
ಶಿವಮೊಗ್ಗ.ಜು.27: ಜಿಲ್ಲೆಯಾಧ್ಯಂತ ದಾಳಿ ನಡೆಸಿದ ಪೊಲೀಸರು ಶಾಲಾ ಕಾಲೇಜುಗಳ 100 ಮೀ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಡಿ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ, ಹೋಟೆಲ್ ಗಳನ್ನು ಪತ್ತೆ ಹಚ್ಚಿ COTPA ಕಾಯ್ದೆ ಅಡಿ 10 ಪ್ರಕರಣವನ್ನು ದಾಖಲಿಸಲಾಗಿದೆ.
ಒಟ್ಟು 646 COTPA ಪ್ರಕರಣಗಳಲ್ಲಿ ರೂ.64,600 ದಂಡ ವಸೂಲಿಮಾಡಲಾಗಿದೆ.
ಅಲ್ಲದೇ ಶಾಲಾ ಕಾಲೇಜುಗಳ ಹತ್ತಿರ 294 IMV ಪ್ರಕರಣಗಳು ಮತ್ತು 438 ಲಘು (Petty Cases) ಪ್ರಕರಣಗಳನ್ನು ದಾಖಲು ಮಾಡಲಾಗಿದೆ.