Shimoga| ಜಯಕರ್ನಾಟಕ ಸಂಘಟನೆಯಿಂದ ಕ್ರೀಡಾ ಸಾಧಕ ಸೂರ್ಯವಂಶಿಗೆ ಸನ್ಮಾನ | ರಾಜ್ಯಮಟ್ಟದ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದ ಅರಣ್ಯ ರಕ್ಷಕ ಸೂರ್ಯವಂಶಿ

ಶಿವಮೊಗ್ಗ: ಯಾವುದೇ ಸಾಧನೆ ವ್ಯಕ್ರಿಯ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ಸಂಘಟನೆ ಉಪಾಧ್ಯಕ್ಷ ಅನಿಲ್ ಸಿ ಅಭಿಪ್ರಾಯಪಟ್ಟರು.

ಉಂಬ್ಳೇಬೈಲು ವಲಯ ಅರಣ್ಯ ಕಚೇರಿಯಲ್ಲಿ ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಅರಣ್ಯ ರಕ್ಷಕ ಮಾಲತೇಶ ಸೂರ್ಯವಂಶಿ ಯವರನ್ನು ಸನ್ಮಾನಿಸಿ ಮಾತನಾಡಿದರು.


ಅರಣ್ಯ ಇಲಾಖೆಯ ಸೇವೆಯ ನಡುವೆಯೂ ಸೂರ್ಯವಂಶಿಯವರ ಸಾಧನೆ ಗಮನಾರ್ಹ ಎಂದರು.
ಸಂಘಟನೆ ಪ್ರಮುಖರಾದ ವಿಶ್ವನಾಥ ಗೌಡ್ರು, ನಾರಾಯಣ ಗೌಡ್ರು, ಪದ್ಮನಾಭ ರಾಘವೇಂದ್ರ, ರಾಜ ವಿಶ್ವನಾಥ್, ಪ್ರದೀಪ್, ಹೇಮಂತ್, ಕಿರಣ್, ಉಪವಲಯ ಅರಣ್ಯಾಧಿಕಾರಿಗಳಾದ ಅಬ್ದುಲ್ ಕರೀಮ್, ಚಂದ್ರಶೇಖರ್, ಅರುಣ್ ಕುಮಾರ್, ಗಿಡ್ಡಸ್ವಾಮಿ, ನವೀನ್, ಪವನ್, ದಿನೇಶ್, ಅರಣ್ಯ ರಕ್ಷಕ ಸುನೀಲ್, ಸಂಜು, ರಿಯಾಜ್, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು

Exit mobile version