ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಆರಂಭ

ಮನೆಯಿಂದಲೇ ಮತದಾನ ಚಲಾವಣೆಗೆ ಸಿಇಓ ರವರಿಂದ ಚಾಲನೆ

ಶಿವಮೊಗ್ಗ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಅಂಗವಾಗಿ ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶರಾವತಿ ನಗರದ 91 ವರ್ಷದ ಹಿರಿಯ ನಾಗರೀಕರಾದ ಚಂದ್ರಶೇಖರಪ್ಪ, ಕೋಟೆ ರೋಡ್‌ ವ್ಯಾಪ್ತಿಯ 90 ವರ್ಷದ ಹಿರಿಯ ನಾಗರಿಕರಾದ ಅನ್ನಪೂರ್ಣಮ್ಮ ಹಾಗೂ ಹೊಸಮನೆ ವ್ಯಾಪ್ತಿಯ ಹನುಮಂತರಾಯಪ್ಪ (PWD ) ವಿಶೇಷ ಚೇತನ ಮತದಾರರು Postal Ballot ಮೂಲಕ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಈ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕಡ್ಡಾಯವಾಗಿ ಮತದಾನ ಮಾಡುವ ಅಭಿಲಾಷೆಯನ್ನು ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೂಗುಚ್ಚ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿಗಳು, ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳು, ಸೆಕ್ಟರ್‌ ಆಪೀಸರ್ ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು,ಬಿ ಎಲ್ ಓ ರವರು ಹಾಜರಿದ್ದರು.

Exit mobile version