ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹ : ಜು.8 ರಿಂದ ಸ್ವಚ್ಚ ವಾಹಿನಿ ಆಟೋ ಚಾಲಕ, ಸಿಬ್ಬಂದಿಗಳ ಪ್ರತಿಭಟನೆ

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹ : ಜು.8 ರಿಂದ ಸ್ವಚ್ಚ ವಾಹಿನಿ ಆಟೋ ಚಾಲಕ, ಸಿಬ್ಬಂದಿಗಳ ಪ್ರತಿಭಟನೆ

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯ್ತಿ ಆಟೋ ಚಾಲಕ ಸಹಾಯಕರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಜಿಪಂ ಕಾರ್ಯಾಲಯದ ಎದುರು ಜು.8 ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.

ಸ್ವಚ್ಚವಾಹಿನಿ ನೌಕರರನ್ನು ಗ್ರಾಪಂ ನೌಕರರಾಗಿ ಪರಿಗಣಿಸಬೇಕು. ತಿಂಗಳ ವೇತನ ಜಾರಿ‌ಮಾಡಬೇಕು. ಸ್ವಚ್ಚವಾಹಿನಿ ತರಬೇತಿ ಪಡೆದ ಎಲ್ಲಾ ಚಾಲಕರಿಗೂ ಆಟೋ‌ ನೀಡಬೇಕು. ತರಬೇತಿ ಪಡೆದ ಎಲ್ಲರಿಗೂ ಕೆಲಸ ನೀಡಬೇಕು. ಕೆಲಸ ಮಾಡುವಾಗ ಗ್ಲೌಸ್, ಮಾಸ್ಕ್ ನೀಡಬೇಕು. ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಸೌಲಭ್ಯ ಒದಗಿಸಬೇಕು ಮತ್ತು ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಧರಣಿ ಹಮ್ಮಿ ಕೊಳ್ಳಲಾಗಿದೆ.
ಅನಿರ್ಧಿಷ್ಠಾವಧಿ ಧರಣಿ ಲಿಖಿತ ಭರವಸೆ ನೀಡುವ ತನಕ ನಡೆಯಲಿದೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.

Exit mobile version