![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ರೈತ ಕೂಲಿಕಾರ್ಮಿಕರ ಆರ್ಥಿಕ ಹಿತದೃಷ್ಟಿಯಿಂದ ಸಂಘ ಸ್ಥಾಪನೆ : ಹಲವು ಸೌಲಭ್ಯ ನೀಡುವ ಆಶಯ ನಮಗಿದೆ : ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎನ್.ವೈ.ಸುರೇಶ್
ಹೊಸನಗರ: ನಗರ ಹೋಬಳಿ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿಯ ಸಣ್ಣ ರೈತರು, ಕೂಲಿಕಾರ್ಮಿಕರ ಆರ್ಥಿಕ ಹಿತದೃಷ್ಟಿಯಿಂದ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರ ಸಂಘ ಸ್ಥಾಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಎನ್.ವೈ. ಹೇಳಿದರು.
ತಾಲೂಕಿನ ಚಿಕ್ಕಪೇಟೆ ಶ್ರೀ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ಸಂಘದ ಪ್ರಥಮ ವರ್ಷದ ಸರ್ವಸದಸ್ಯರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಂಘವು 267 ಶೇರುದಾರರನ್ನು ಹೊಂದಿದೆ. ಪಿಗ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಒಂದು ವರ್ಷ ಮಾತ್ರ ಆಗಿರುವ ಹಿನ್ನೆಲೆಯಲ್ಲಿ ಲಾಭಾಂಶ ಘೋಷಣೆ ಮಾಡಿಲ್ಲ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣ್ಯ ಕೆ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮಾತನಾಡಿ ಉತ್ತಮ ಉದ್ದೇಶದೊಂದಿಗೆ ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು ನಗರ ಹೋಬಳಿಯಾಧ್ಯಂತ ವಿಸ್ತರಿಸುವ ಆಶಯವಿದೆ. ಇದಕ್ಕೆ ಜನರ ಸಹಕಾರ ಮುಖ್ಯ ಎಂದರು.
ನಿರ್ದೇಶಕರಾದ ಮಂಜುನಾಥ ಬಂಕ್ರಿಬೀಡು, ಪುರುಶೋತ್ತಮ ಕಿಲಗಾರು, ಕವಿರಾಜ ಕಾನಬೈಲು, ಚಂದ್ರ , ಪ್ರಕಾಶ ರ್ಯಾವೆ, ದೇವರಾಜ ಸಾದಗಲ್, ಸುರೇಶ ಬಾವಿಕಟ್ಟೆ, ರಸಲ್ ರಾಜು, ಅಶ್ವಿನಿ ರಾಜೇಶ್, ಸವಿತಾ ರವಿಕಾಂತ, ಶ್ರುಪಾ ಜಗದೀಶ್, ಸುಗುಣ ನಿಲ್ಸಕಲ್, ಶೇರುದಾರರು ಪಾಲ್ಗೊಂಡಿದ್ದರು.
ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.