ಸ್ಬಚ್ಚ ಭಾರತ್ ಅಂತಾರೇ. ಕೋಟಿ ವೆಚ್ಚ ಮಾಡ್ತಾರೆ. ಡೆಂಗ್ಯೂ ಹರಡುತ್ತಿದೆ ಅಂತಾರೇ.. ಇನ್ನಿಲ್ಲದ ಜಾಗೃತಿ ಮೂಡಿಸ್ತಾರೆ. ಹಾಗಾದ್ರೇ.. ಒಮ್ಮೆ ಈ ನಿಲ್ದಾಣಕ್ಕೆ ಭೇಟಿ ಕೊಡಿ..

ಸ್ಬಚ್ಚ ಭಾರತ್ ಅಂತಾರೇ. ಕೋಟಿ ವೆಚ್ಚ ಮಾಡ್ತಾರೆ. ಡೆಂಗ್ಯೂ ಹರಡುತ್ತಿದೆ ಅಂತಾರೇ.. ಇನ್ನಿಲ್ಲದ ಜಾಗೃತಿ ಮೂಡಿಸ್ತಾರೆ. ಹಾಗಾದ್ರೇ.. ಒಮ್ಮೆ ಈ ನಿಲ್ದಾಣಕ್ಕೆ ಭೇಟಿ ಕೊಡಿ..

ಹೊಸನಗರ: ಸ್ವಚ್ಚ ಭಾರತ್ ಅಂತಾರೇ. ಕೋಟಿಗಟ್ಟಲೇ ವೆಚ್ಚ ಮಾಡ್ತಾರೆ. ಗಾಂಧಿಜಯಂತಿಯಂದು ಪೊರಕೆ ಹಿಡಿದು ಫೋಟೋ ಹೊಡ್ಸೋತಾರೇ.. ಇನ್ನು ಡೆಂಗ್ಯೂ ಭೀಕರವಾಗಿ ಹರಡ್ತಿದೆ ಅಂತಾರೇ.. ಗಲ್ಲಿ ಗಲ್ಲೀಲಿ ಮೈಕ್ ಹಿಡಿತಾರೆ. ಕರ ಪತ್ರ ಹಿಡಿದು ಜಾಗೃತಿ ಮೂಡಿಸ್ತಾರೇ.. ಅಷ್ಟೇ ಅಲ್ಲ ಮನೆಮನೆಗೂ ಭೇಟಿ‌ ನೀಡಿ.. ಅಂಗಾತ ಬಿದ್ದ ತೆಂಗಿನ ಚಿಪ್ಪನ್ನು ಉಲ್ಟಾ ಹಾಕಿ ಅಂತಾರೆ.. ಎಚ್ಚರ.. ಎಚ್ಚರ ಅಂತ ಭಯ ಹುಟ್ಟುಸ್ತಾರೇ..

ಅಂತಹ ಕಾಳಜಿಯುಕ್ತ ಅಧಿಕಾರಿಗಳು ಒಮ್ಮೆ ಮಾರುಕಟ್ಟೆ ನಿಲ್ದಾಣ ಒಟ್ಟಿಗಿರುವ ಈ ಭಾಗಕ್ಕೆ ಒಮ್ಮೆ ಭೇಟಿ ಕೊಡಿ.. ಸ್ವಚ್ಚತೆ ಹಾಗು ಡೆಂಗ್ಯೂ ತಡೆಯಲು ಮಾದರಿಯಾಗಿ ಈ ಪ್ರದೇಶವನ್ನು ತೆಗೆದುಕೊಳ್ಳಬಹುದು..

ಇದು ಎಲ್ಲಿ ಅಂತೀರಾ.. ಹೊಸನಗರ ತಾಲೂಕಿನ ಪ್ರತಿಷ್ಠಿತ ಸರ್ಕಲ್ ಗಳಲ್ಲಿ ಒಂದಾದ ಬಟ್ಟೆಮಲ್ಲಪ್ಪ ಸರ್ಕಲ್.. ಇಲ್ಲಿಯ ನಿಲ್ದಾಣ, ಮಾರುಕಟ್ಟೆ ಜೊತೆಗಿರುವ ಶೌಚಾಲಯ ಹೇಗಿದೆ ಎಂದು ಹೇಳಲು ಪದಪುಂಜಗಳು ಸಾಲುತ್ತಿಲ್ಲ.. ಈ ಸುದ್ದಿಯೊಂದಿಗೆ ಒಂದಷ್ಟು ಫೋಟೋ‌ ಹಾಕಲಾಗಿದೆ.. ನೀವೇ ನೋಡಿಕೊಳ್ಳಿ.. ಅಲ್ಲೇ ಇದ್ದು ವರ್ಣಿಸ್ತೀರೋ.. ಇಲ್ಲ ವಾಕರಿಕೆ ಬಂದು ಜಾಗ ಖಾಲಿ ಮಾಡ್ತೀರೋ‌ ನಿಮಗೆ ಬಿಟ್ಟಿದ್ದು.


ಬಟ್ಟೆಮಲ್ಲಪ್ಪದ ಮುಖ್ಯ ಸರ್ಕಲ್ ನಲ್ಲಿರುವ ನಿಲ್ದಾಣ, ಮಾರುಕಟ್ಟೆ ವ್ಯವಸ್ಥೆ ನೋಡಿದರೇ.. ಇಲ್ಲಿ ಗ್ರಾಮಪಂಚಾಯ್ತಿ ಇದೆಯೋ ಇಲ್ವೋ ಎಂಬ ಅನುಮಾನ ಖಂಡಿತವಾಗಿ ಕಾಡುತ್ತದೆ. ಆದರೆ ಸಂತೆ ಶುಲ್ಕ‌ ವಸೂಲಿ ಮಾಡೋದ್ರಿಂದ ಪಂಚಾಯ್ತಿ ಇದೇ ಅಂತ ತಿಳ್ಕೋಬಹುದು..
ಹರಿದ್ರಾವತಿ ಗ್ರಾಪಂ ವ್ಯಾಪ್ತಿಗೆ ಸೇರಿದ್ದು, ಪಂಚಾಯ್ತಿಗೆ ಬಂದ ಸ್ವಚ್ಚವಾಹಿನಿ ಏನು ಮಾಡ್ತಾ ಇದೆಯೋ ಗೊತ್ತಿಲ್ಲ..
ಇನ್ನು ತಾಲೂಕು ಆರೋಗ್ಯ ಇಲಾಖೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸೋ‌ ಮುನ್ನ ಈ ಸ್ಥಳಕ್ಕೆ ತಪ್ಪದೇ ಭೇಟಿ ನೀಡಬೇಕು. ಯಾಕಂದ್ರೆ ಬಟ್ಟೆಮಲ್ಲಪ್ಪ ಹೊಸನಗರ ತಾಲೂಕಿಗೆ ಸೇರಿದೆ.


ತಾಲೂಕಿನ ಪ್ರಮುಖ ಭಾಗವಾದ ಬಟ್ಟೆಮಲ್ಲಪ್ಪದ ಸ್ಥಿತಿ ಹೀಗಾದ್ರೆ ಉಳಿದ ಗ್ರಾಮಗಳ ಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ತಾಲೂಕು ಆಡಳಿತ ಗಮನ‌ಹರಿಸುತ್ತದೋ ಕಾದು ನೋಡಬೇಕು.

Exit mobile version