D.S.ARUN MLC| ಕಲುಷಿತ ನೀರು ಕುಡಿದು ಪ್ರಾಣ ಹಾನಿ ಆತಂಕ : ಸರ್ಕಾರದ ಗಮನ ಸೆಳೆದ ಡಿ.ಎಸ್.ಅರುಣ್ ಕಳವಳ

D.S.ARUN MLC| ಕಲುಷಿತ ನೀರು ಕುಡಿದು ಪ್ರಾಣ ಹಾನಿ ಆತಂಕ : ಸರ್ಕಾರದ ಗಮನ ಸೆಳೆದ ಡಿ.ಎಸ್.ಅರುಣ್ ಕಳವಳ

ಬೆಂಗಳೂರು : ರಾಜ್ಯದಲ್ಲಿ ಕಲುಷಿತ ನೀರು ಸರಬರಾಜಿನ ಸೇವನೆಯಿಂದ ಪ್ರಾಣ ಹಾನಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುದ್ದ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಿ.ಎಸ್.ಅರುಣ್ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ವಾಟರ್ ಆಡಿಟ್ ನಡೆಸಿದ್ದಲ್ಲಿ ಸಮಸ್ಯೆಗೆ ಪರಿಹಾರ ಸಿಗುವುದೆಂದು ಸಲಹೆ ನೀಡಿದರು, ಮಳೆಗಾಲದಲ್ಲಿ ಪೈಪ್‌ಲೈನ್ ಒಡೆದು ಚರಂಡಿ ಹಾಗೂ ಕಲುಷಿತ ನೀರು ಕುಡಿಯುವ ನೀರಿಗೆ ಸೇರುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಳೆದ ದಿನ ಬೆಂಗಳೂರಿನ ರಾಜಾಜಿನಗರ ಕ್ಷೇತ್ರಕ್ಕೆ ಭೇಟಿ ನೀಡಿ ಸಂಗ್ರಹಿಸಿದ್ದ ಕಲುಷಿತ ನೀರು ಮಾದರಿಯನ್ನು, ಸದನದಲ್ಲಿ ಪ್ರದರ್ಶಿಸಿದ ಅವರು, ಕಲುಷಿತ ನೀರು ಸೇವನೆಯಿಂದ ಆಗುವ ದುಷ್ಪರಿಣಾಮದ ವಾಸ್ತವಾಂಶವನ್ನು ಸಚಿವರು ಹಾಗೂ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವರು ಸಕಾರಾತ್ಮವಾಗಿ ಸ್ಪಂದಿಸಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Exit mobile version