
ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ | ಪ್ರೇಮಾ ಕಾಂತರಾಜ್
ಹೊಸನಗರ: ಮಹಿಳಾ ದೌರ್ಜನ್ಯ ತಡೆಗೆ ನಿರಂತರ ಜಾಗೃತಿ ಅಗತ್ಯ ಎಂದು ಮಹಿಳಾ ಆಪ್ತ ಸಮಾಲೋಚಕಿ ಪ್ರೇಮಾ ಕಾಂತರಾಜ್ ಹೇಳಿದರು.
ತಾಲೂಕಿನ ಅರಮನೆಕೊಪ್ಪ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೌಟುಂಬಿಕ, ಸಾಮಾಜಿಕವಾಗಿ ದೌಜ್ಯನ್ಯಕ್ಕೆ ಒಳಗಾಗುವ ಮಹಿಳೆಗೆ ದಿನದ 24 ಗಂಟೆಯು ಕೂಡ ಸಹಕಾರ ನೀಡಲು ಮಹಿಳಾ ಸಾಂತ್ವನ ಕೇಂದ್ರ ಬದ್ಧವಾಗಿರುತ್ತದೆ ಎಂದರು.
ಮಹಿಳಾ ದೌರ್ಜನ್ಯ ಪ್ರಕರಣಗಳು ಕಂಡು ಬಂದಾಗ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸಾಂತ್ವನಕೇಂದ್ರದಲ್ಲಿ ಮಹಿಳೆಯ ಆರೋಗ್ಯ, ಆಪ್ತ ಸಮಾಲೋಚನೆ, ಆಶ್ರಯ ನೀಡಲಾಗುವುದು. ಬಗೆಹರಿಯದಿದ್ದಲ್ಲಿ ಕಾನೂನಿನ ಹೋರಾಟಕ್ಕು ಸಹಕರಿಸಲಾಗುವುದು ಎಂದರು.
ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ವನಮಾಲ, ಭೇಟಿ ಬಚಾವೋ ಭೇಟಿ ಪಡಾವೋ, ಪೋಕ್ಸೋ ಕಾಯಿದೆ, ಬಾಲ್ಯವಿವಾಹ ಕುರಿತು ಮಾಹಿತಿ ನೀಡಿದರು.
ಗ್ರಾಮಸಭೆಯಲ್ಲಿ ಅರಮನೆಕೊಪ್ಪ ಗ್ರಾಮದ ಮಹಿಳೆಯರು ಚರ್ಚೆ ನಡೆಸಿದರು. ಪಿಡಿಒ ಪರಮೇಶ್ವರ್ ಉಪಸ್ಥಿತರಿದ್ದರು.