ಗ್ರಾಪಂ ಸದಸ್ಯೆ ಸುಮನ ಭಾಸ್ಕರ್, ಯುವ ಮುಖಂಡ ಕಿಶೋರ್ ‘ಅಮ್ಮ ಮಗ’ ಕಾಂಗ್ರೆಸ್ ಸೇರ್ಪಡೆ

ಗ್ರಾಪಂ ಸದಸ್ಯೆ ಸುಮನಾ ಕಾಂಗ್ರೆಸ್ ಸೇರ್ಪಡೆ
ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸದಸ್ಯರಾದ ಸುಮನ ಭಾಸ್ಕರ್ ಮತ್ತು ಅವರ ಪುತ್ರ ಕಿಶೋರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಮೂಡುಗೊಪ್ಪ ಗ್ರಾಪಂ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆಲವು ಕಂಡ ಸುಮನ ಭಾಸ್ಕರ್, ಮತ್ತು ಯುವ ಮುಖಂಡ ಕಿಶೋರ್ ಹಿಂದೆ ಬಿಜೆಪಿಯಲ್ಲಿ ಗುರುತಿಸಿ ಕೊಂಡಿದ್ದು ನಂತರ ತಟಸ್ಥವಾಗಿ ಉಳಿದಿದ್ದರು.

ಹೊಸೂರು, ಅರಮನೆಕೊಪ್ಪ ಗ್ರಾಪಂಯ ಬೂತ್ ಮಟ್ಟದಲ್ಲಿ ಕಿಮ್ಮನೆ ಮತ್ತು ಮಂಜುನಾಥಗೌಡ ಜಂಟಿಯಾಗಿ ಇಬ್ಬರು ನಾಯಕರು ಪ್ರಚಾರಕೈಗೊಂಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಕರುಣಾಕರಶೆಟ್ಟಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುಮಾ ಸುಬ್ರಹ್ಮಣ್ಯ, ಹೋಬಳಿ ಪ್ರಮುಖರು ಹಾಜರಿದ್ದರು.

Exit mobile version