ಹೊಸನಗರ: ಕರ್ನಾಟಕ ಎಂದರೆ ಕರುನಾಡು, ಅದೇ ಕರುನಾಡು ಉನ್ನತಭೂಮಿಯಾಗಿದ್ದು ಹೆಸರಿನಲ್ಲೇ ಏಕತೆ ಹೊಂದಿದೆ ಎಂದು ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ನೆರವೇರಿಸಿ, ದೇಶದಲ್ಲೇ ಕರ್ನಾಟಕ ವಿಶೇಷ ಸ್ಥಾನಮಾನ ಹೊಂದಿದೆ ಎಂದರು.
ಕನ್ನಡನಾಡು ನುಡಿಯ ಅಭಿಮಾನ ನಿರಂತರವಾಗಿರಬೇಕು. ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗಬಾರದು. ಪ್ರತಿದಿನ ಪ್ರತಿಕ್ಷಣ ಕನ್ನಡದ ಮೇಲೆ ಅಭಿಮಾನ ವ್ಯಕ್ತವಾದಾಗ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದರು.

ಸಾಹಿತಿ ಡಾ.ಶಾಂತರಾಮ ಪ್ರಭು ಉಪನ್ಯಾಸ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಣಪ್ಪ, ಪಪಂ ಮುಖ್ಯಾಧಿಕಾರಿ ಮಾರುತಿ, ಸಿಪಿಐ ಗುರಣ್ಣ ಎಸ್.ಹೆಬ್ಬಾಳ, ಬಿಇಒ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಪಪಂ ಸದಸ್ಯರಾದ ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಸಿಂಥಿಯಾ, ಶಾಹಿನಾ ನಾಸಿರ್, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Exit mobile version