
ಹೊಸನಗರ: ಹುಲಿಕಲ್ ಭೀಕರ ರಸ್ತೆ ಅಪಘಾತ (Hit and run) ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಂಪದಕೈ ಗ್ರಾಮದ ಮೃತ ರವಿ ಪತ್ನಿ ಶಾಲಿನಿ (44) ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಾಲಿನಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಯಾಗಿ ಶಿವಮೊಗ್ಗದ ಚಂದ್ರಗಿರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಪಘಾತದಲ್ಲಿ ಪತಿ ರವಿ ಸ್ಥಳದಲ್ಲೇ ಅಸುನೀಗಿದ್ದರು.
ಇವರಿಗೆ 7ನೇ ತರಗತಿಯ ಅಶ್ವಲ್, 4 ನೇ ತರಗತಿಯ ಅನೂಪ್ ಇಬ್ಬರು ಮಕ್ಕಳಿದ್ದು ವಿಧಿಯ ಕ್ರೂರತೆಗೆ ಸಾಕ್ಷಿ ಎಂಬಂತೆ ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ.
ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಮೃತ ಶಾಲಿನಿ ಶವವನ್ನು ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರ ಮಾಸ್ತಿಕಟ್ಟೆ ಸಮೀಪದ ಕಂಪದಕೈಗೆ ತಂದು ಅಂತ್ಯಕ್ರಿಯೆ ನಡೆಯಲಿದೆ.
ಹುಲಿಕಲ್ ಭೀಕರ ಅಪಘಾತದಲ್ಲಿ ಇದ್ದ ಒಬ್ಬ ಮಗನನ್ನು (ಶಿಶಿರ 11 ವರ್ಷ) ಕಳೆದುಕೊಂಡು ತಾಯಿ ಇಂದಿರಾ ಏಕಾಂಗಿಯಾದರೇ.. ಮತ್ತೊಂದು ಕುಟುಂಬದಲ್ಲಿ ತಂದೆ (ರವಿ) ತಾಯಿ ( ಶಾಲಿನಿ) ಕಳೆದುಕೊಂಡು ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಒಟ್ಟಾರೆ ವಿಧಿಯ ಕ್ರೂರತನಕ್ಕೆ ಎರಡು ಬಡ ಕುಟುಂಬಗಳು ಬರಿದಾಗಿ ಅಳಿದುಳಿದವರನ್ನು ಅನಾಥರನ್ನಾಗಿಸಿದೆ.