
ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ | ಆರೋಡಿ ಕ್ರಾಸ್, ಹಿಲ್ಕುಂಜಿ ಅಪ್ ಭಾಗದಲ್ಲಿ ಮೂರು ದಿನದ ನಂತರ ದುರಸ್ಥಿ ಕಾರ್ಯ | ಹೆದ್ದಾರಿ ಎಇಇ ನಿಂಗಪ್ಪ ಭರವಸೆ
ಶಿವಮೊಗ್ಗ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ NATIONAL HIGHWAY 766c ಮಾರ್ಗದ ಆರೋಡಿ ಕ್ರಾಸ್, ಹಿಲ್ಕುಂಜಿ ಅಪ್ ರಸ್ತೆಯ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು NH AEE ನಿಂಗಪ್ಪ ಭರವಸೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಗಮನ ಹರಿಸಲಾಗುವುದು. ಕಂಟ್ರಾಕ್ಟರ್ ನ್ಯಾಷನಲ್ ಶರೀಫ್ ಜೊತೆ ಮಾತನಾಡಿದ್ದು ಶೀಘ್ರದಲ್ಲಿ ದುರಸ್ಥಿ ಕಾರ್ಯ ನಡೆಸಲಾಗುವುದು ಎಂದಿದ್ದಾರೆ.