
ಶಿವಮೊಗ್ಗ ಜು.26: ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ ಶಿವಮೊಗ್ಗ ಘಟಕದ ವತಿಯಿಂದ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗೋಪಿವೃತ್ತದಿಂದ ಹೊರಟ ಮೆರವಣಿಗೆ ಡಿಸಿ ಕಚೇರಿವರೆಗೆ ಸಾಗಿತು.
ಪ್ರಮುಖ ಬೇಡಿಕೆಯಾದ ಭವಿಷ್ಯನಿಧಿ ಮತ್ತು 60 ವರ್ಷ ದಾಟಿದ ಟೈಲರ್ ವೃತ್ತಿ ಬಾಂಧವರಿಗೆ ಮಾಸಿಕ ಪಿಂಚಣಿ ಜಾರಿ ಮಾಡಲು ಮೀನಾ ಮೇಷ ಎಣಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ಆರೋಪಿಸಲಾಯಿತು.
ಟೈಲರ್ ವೃತ್ತಿ ಬಾಂದವರ ಎಲ್ಲಾ ನ್ಯಾಯಯುತ ಬೇಡಿಕೆಯನ್ನು 15 ದಿನದಲ್ಲಿ ಈಡೇರಿಸುವಂತೆ ಆಗ್ರಹಿಸಲಾಯಿತು.
ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್.ಸುಬ್ರಹ್ಮಣ್ಯ, ಪ್ರಧಾನಕಾರ್ಯದರ್ಶಿ ಸಿ.ರವೀಂದ್ರ, ಉಪಾಧ್ಯಕ್ಷರಾದ ತೀರ್ಥಹಳ್ಳಿ ಚಂದ್ರಶೇಖರ್, ಶ್ರೀಧರ ಸಾಗರ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ, ಸೊರಬ ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹೊಸನಗರದ ಟೈಲರ್ ವೃತ್ತಿಬಾಂಧವರು ಬಾಗಿ:
ಶಿವಮೊಗ್ಗದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಹೊಸನಗರ ತಾಲೂಕು ಸಂಘದ ಪ್ರತಿನಿಧಿಗಳು ಭಾಗವಹಿಸಿ ಪ್ರತಿಭಟನೆಗೆ ಸಾಥ್ ನೀಡಿದರು.
ಅಣ್ಣಪ್ಪ ಟೈಲರ್, ಸುಂದರ ಟೈಲರ್, ಸತೀಶ ಟೈಲರ್, ವಿನಯ ಟೈಲರ್, ಸಂಜು, ಮಂಜುನಾಥ್, ಕುಮಾರ್, ರಮೇಶ್, ಶಂಕರ, ಪ್ರಕಾಶ್, ಸಂತೋಷ್, ಸುರೇಶ್, ನಾರಾಯಣ, ಮಹಿಳಾ ಪ್ರತಿನಿಧಿ ವಸಂತ ರೇಖಾ ಭಾಗವಹಿಸಿದ್ದರು.