ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ : ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ

ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ :

ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ

ಹೊಸನಗರ: ಸ್ವಾತಂತ್ರ್ಯ ಸಿಕ್ಕಿದ ದಶಕ ಹಲವು  ಕಳದರೂ ಇನ್ನೂ ಇಲ್ಲಿನ ಕುಗ್ರಾಮಗಳು ಅಭಿವೃದ್ಧಿ ಕಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು,  ಸಂಪರ್ಕ ರಸ್ತೆ ಭಾಗ್ಯ ಕಾಣುವಂತಾಗಿಲ್ಲ. ಜನಪ್ರತಿನಿಧಿಗಳು ಕುಗ್ರಾಮದ ನೈಜವಾದ ಸಂಕಷ್ಟ ಎದುರಿಸಿದ್ದರೇ ಮಾತ್ರ ಗ್ರಾಮದ ಜನ ಸ್ನೇಹಿ ಕೆಲಸ ಮಾಡಲು ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಇಟ್ಟಕ್ಕಿ ಸಂಪರ್ಕ ರಸ್ತೆಯಲ್ಲಿ ನಿರ್ಮಾಣವಾದ ನೂತನ ಸೇತುವೆ ಕಾಮಗಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕುಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಆದಲ್ಲಿ ಆ ಗ್ರಾಮ ಬೆಳಕು ಕಾಣುತ್ತವೆ. ಊರಿಗೆ ಒಂದು ಅಭಿವೃದ್ಧಿ ಕಾಮಗಾರಿ ನಡೆದಲ್ಲಿ ಇಡೀ ಊರೇ ಸಂಭ್ರಮ ಪಡುತ್ತದೆ. ಊರಿನ ಜನ ಖುಷಿಯಿಂದ ನಲಿದಾಡುತ್ತಾರೆ. ಆ ಸಂಭ್ರಮವೇ ನಮಗೇ ಶ್ರೀರಕ್ಷೆ ಯಾಗುತ್ತದೆ ಎಂದರು.
ಮುಸ್ಲಿಂ ಓಲೈಕೆ ಬಜೆಟ್ :
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಕೇವಲ ಮುಸ್ಲಿಂ ಓಲೈಕೆ ಬಜೆಟ್ ಆಗಿದೆ. ಮುಸ್ಲಿಂ ಜನಾಂಗದ ಸಂಪೂರ್ಣ ಅಭಿವೃದ್ಧಿ ಮಾಡುವ ಶಪತ ತೊಟ್ಟಂತೆ ಆ ಸಮುದಾಯದವರನ್ನು ಓಲೈಸಲಾಗಿದೆ. ಎಲ್ಲದರಲ್ಲೂ ಅವರಿಗೆ ಅನುದಾನ ಹಣ ಮೀಸಲಿಡಲಾಗಿದೆ. ರಾಜ್ಯದಲ್ಲಿ ಮುಸ್ಲಿಂರು ಮಾತ್ರ ಇರುವುದೇ.  ಇಲ್ಲಿನ ಗೌಡರು, ಈಡಿಗರು, ದಲಿತರು, ಭಟ್ಟರು ಏನು ಮಾಡಿದ್ದಾರೆ. ಎಂದು ಪ್ರಶ್ನೆ ಮಾಡಿದ ಶಾಸಕರು ಇಂತಹ ನಿರ್ಲಜ್ಜ ಬಜೆಟ್ ಎಂದು ನೋಡಿರಲಿಲ್ಲ ಎಂದು ಟೀಕಿಸಿದರು.
ನಾನು ಬಡವರ ಮನೆಯಲ್ಲಿ ಹುಟ್ಟಿ ಬೆಳೆದವನು. ನನಗೆ ಬಡವರ ಕಷ್ಟ ಸುಖ ಗೊತ್ತಿದೆ. ಕ್ಷೇತ್ರದಲ್ಲಿನ ಕುಗ್ರಾಮದ ಸ್ಥಿತಿಗತಿ ಅರಿವಿದೆ. ಹಾಗಾಗಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಬೇರೆ ಶಾಸಕರು ಈ ವಿಭಾಗದಲ್ಲಿ ಕಣ್ಣೇತ್ತಿ ಸಹ ನೋಡಲಿಲ್ಲ. ಅವರು ಜನ ಸಾಮಾನ್ಯರಂತೆ ಯೋಚಿಸಿದ್ದರೆ ಕ್ಷೇತ್ರ ಯಾವತ್ತೋ ಸಂಪೂರ್ಣ ಅಭಿವೃದ್ಧಿ ಪಥದಲ್ಲಿ ಇರುತ್ತಿತ್ತು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಾವತಿ ವಿಜೇಂದ್ರಚಾರ್, ಸದಸ್ಯರಾದ ಕೃಷ್ಣಮೂರ್ತಿ ತೊಗರೆ, ಚಂದ್ರಶೇಖರ, ಗುತ್ತಿಗೆದಾರ ಸಿ.ವಿ. ಚಂದ್ರಶೇಖರ, ಪಟ್ಟಣ ಪಂಚಾಯತಿ ಸದಸ್ಯ ಹಾಲಗದ್ದೆ ಉಮೇಶ, ನಿವೃತ್ತ ಎಇಇ ಮಲ್ಲಿಕಾರ್ಜುನ, ಸತೀಶ ತಟ್ಟಿ ಇದ್ದರು.
ಹನಿಯ ಸುಬ್ರಹ್ಮಣ್ಯ ನಿರೂಪಿಸಿದರು. ನಾ. ಶ್ರೀ. ಶಶಿಧರ ಸ್ವಾಗತಿಸಿದರು.
Exit mobile version