
ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ 4ನೇ ವರ್ಷದ ಗಣೇಶೋತ್ಸವ, ದಿನಾಂಕ 31 ಆಗಸ್ಟ್ 2022 ರ ಬೆಳಗ್ಗೆ 10 ಗಂಟೆಗೆ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಬೃಹತ್ ಪ್ರತಿಷ್ಠಾಪನ ಮೆರವಣಿಗೆ ನೆಡೆಯಲಿದ್ದು ಗಣಪತಿಯನ್ನು ಪೋಸ್ಟ್ ಆಫೀಸ್ ಪಕ್ಕದ ಸಾವರ್ಕರ್ ಮಂಟಪದಲ್ಲಿ ಪ್ರತಿಷ್ಠಾಪನ ಮಾಡಲಾಗುವುದು ಹೊಸನಗರ ತಾಲೂಕು ಹಿಂದೂ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಜು ತಿಳಿಸಿದರು.
ಹೊಸನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ,15 ದಿನಗಳ ಕಾಲ ನೆಡೆಯಲಿರುವ ಈ ಗಣೇಶೋತ್ಸವದಲ್ಲಿ ಮಕ್ಕಳಿಗೆ ಕೃಷ್ಣವೇಶ ಸ್ಪರ್ಧೆ, ಗಣಹೋಮ ಹಾಗೂ ಅನ್ನ ಸಂತರ್ಪಣೆ, ಯಕ್ಷಗಾನ, ಹಾಗೂ ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,
ದಿನಾಂಕ 14 ಆಗಸ್ಟ್ ಮಧ್ಯಾಹ್ನ 2 ಗಂಟೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಗಣಪತಿಯ ಬೃಹತ್ ಶೋಭಯಾತ್ರೆ ರಾಜಬೀದಿ ಉತ್ಸವದೊಂದಿಗೆ ಹೊಸನಗರದ ಬೀದಿಗಳಲ್ಲಿ ಸಾಗಲಿದೆ ಎಂದರು.
ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಪೂಜಾರಿ, ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.